ಮಣ್ಣಿನ ಸವಕಳಿ ಎಂದರೇನು?
ಭೂ ಮೇಲ್ಮೈಯ ಸಡಿಲವಾದ ಮಣ್ಣಿನ ಪದರವು ಗಾಳಿ, ನೀರು ಮುಂತಾದ ನೈಸರ್ಗಿಕ ಶಕ್ತಿಗಳಿಂದ ಸ್ಥಳಾಂತರಗೊಳ್ಳುವುದನ್ನು ಮಣ್ಣಿನ ಸವಕಳಿ ಎನ್ನುತ್ತಾರೆ.
'ಡೆಕ್ಕನ್ ಟ್ರ್ಯಾಪ್' ಪ್ರದೇಶದಲ್ಲಿ ಯಾವ ಮಣ್ಣು ಸಮೃದ್ಧವಾಗಿ ಕಂಡುಬರುತ್ತದೆ?
ದಖನ್ ಟ್ರ್ಯಾಪ್ ಪ್ರದೇಶದಲ್ಲಿ ಕಪ್ಪು ಮಣ್ಣು (Black Soil) ಕಂಡುಬರುತ್ತದೆ.
ಜಂಬಿಟ್ಟಿಗೆ ಮಣ್ಣು ಎಂತಹ ಹವಾಮಾನದಲ್ಲಿ ನಿರ್ಮಾಣವಾಗುತ್ತದೆ?
ಅಧಿಕ ಮಳೆ ಮತ್ತು ಅತಿ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಈ ಮಣ್ಣು ನಿರ್ಮಾಣವಾಗುತ್ತದೆ.
ಮಣ್ಣಿನ ಸಂರಕ್ಷಣೆ ಎಂದರೆ ಏನು?
ಮಣ್ಣಿನ ಸವಕಳಿಯನ್ನು ತಡೆಗಟ್ಟುವುದು ಮತ್ತು ಅದರ ಫಲವತ್ತತೆಯನ್ನು ಕಾಪಾಡುವುದನ್ನು ಮಣ್ಣಿನ ಸಂರಕ್ಷಣೆ ಎನ್ನುವರು.
ಮಣ್ಣಿನ ಶಾಸ್ತ್ರ ಅಥವಾ ಪೆಡಾಲಜಿ (Pedology) ಯಾವುದರ ಬಗ್ಗೆ ಅಧ್ಯಯನ ಮಾಡುತ್ತದೆ?
ಮಣ್ಣಿನ ಉತ್ಪತ್ತಿ, ವಿಧಗಳು, ರಚನೆ ಮತ್ತು ಗುಣಧರ್ಮಗಳ ಬಗ್ಗೆ ಅಧ್ಯಯನ ಮಾಡುತ್ತದೆ.