ಅಧ್ಯಾಯದ ಪರಿಚಯ
ವಿಭಾಗ 1: ಸಂಖ್ಯಾಶಾಸ್ತ್ರದ ಪರಿಕಲ್ಪನೆಗಳು ಮತ್ತು ಸಂಖ್ಯೆಗಣಿತ ಸರಾಸರಿ (ಟಿಪ್ಪಣಿಗಳು)
1. ಪೀಠಿಕೆ ಮತ್ತು ಮೂಲ ಪರಿಕಲ್ಪನೆಗಳು:
- ಸಂಖ್ಯಾಶಾಸ್ತ್ರ (Statistics): ದತ್ತಾಂಶಗಳನ್ನು (Data) ಸಂಗ್ರಹಿಸಿ, ವರ್ಗೀಕರಿಸಿ, ವಿಶ್ಲೇಷಿಸುವ ಗಣಿತದ ಶಾಖೆ.
- ವ್ಯಾಪ್ತಿ (Range): ಗರಿಷ್ಠ ಮೌಲ್ಯ ಮತ್ತು ಕನಿಷ್ಠ ಮೌಲ್ಯದ ನಡುವಿನ ವ್ಯತ್ಯಾಸ. (ಉದಾ: 50 - 10 = 40).
- ಆವೃತ್ತಿ (Frequency - ): ಒಂದು ಮೌಲ್ಯ ಎಷ್ಟು ಬಾರಿ ಮರುಕಳಿಸುತ್ತದೆ ಎಂಬ ಸಂಖ್ಯೆ.
- ಸಂಚಿತ ಆವೃತ್ತಿ (Cumulative Frequency - ): ಆವೃತ್ತಿಗಳನ್ನು ಕ್ರಮವಾಗಿ ಕೂಡುಕ್ತಾ ಹೋಗುವ ಒಟ್ಟು ಮೌಲ್ಯ.
2. ಸಂಖ್ಯೆಗಣಿತ ಸರಾಸರಿ (Arithmetic Mean - ):
- ಎಲ್ಲಾ ಮೌಲ್ಯಗಳ ಮೊತ್ತವನ್ನು ಮೌಲ್ಯಗಳ ಸಂಖ್ಯೆಯಿಂದ ಭಾಗಿಸುವುದು (Average).
- ಸಾಮಾನ್ಯ ಸೂತ್ರ: (ಬರೀ ದತ್ತಾಂಶಗಳಿಗೆ).
- ಆವೃತ್ತಿ ವಿತರಣೆ ಸೂತ್ರ (ನೇರ ವಿಧಾನ): (ಇಲ್ಲಿ - ಆವೃತ್ತಿ, - ವರ್ಗಮಧ್ಯ).
ವಿಭಾಗ 2: ಮಧ್ಯಕ, ಬಹುಲಕ ಮತ್ತು ಅವುಗಳ ಪ್ರಾಯೋಗಿಕ ಸಂಬಂಧ (ಟಿಪ್ಪಣಿಗಳು)
3. ಮಧ್ಯಕ (Median):
- ದತ್ತಾಂಶವನ್ನು ಆರೋಹಣ/ಅವರೋಹಣ ಕ್ರಮದಲ್ಲಿ ಜೋಡಿಸಿದಾಗ ನಿಖರವಾಗಿ ಮಧ್ಯದಲ್ಲಿರುವ ಬೆಲೆ.
- ಗುಂಪುಗೊಳಿಸಿದ ದತ್ತಾಂಶದ ಸೂತ್ರ:
4. ಬಹುಲಕ (Mode):
- ದತ್ತಾಂಶದಲ್ಲಿ ಅತಿ ಹೆಚ್ಚು ಬಾರಿ ಮರುಕಳಿಸುವ (ಅತಿಹೆಚ್ಚು ಆವೃತ್ತಿ ಇರುವ) ಮೌಲ್ಯ.
- ಗುಂಪುಗೊಳಿಸಿದ ದತ್ತಾಂಶದ ಸೂತ್ರ:
5. ಪ್ರಾಯೋಗಿಕ ಸಂಬಂಧ (Empirical Formula):
- ಸರಾಸರಿ, ಮಧ್ಯಕ ಮತ್ತು ಬಹುಲಕಗಳ ನಡುವಿನ ನಿಯಮ: ಅಥವಾ
ವಿಭಾಗ 3: ಒಜೈವ್ (Ogive) ನಕ್ಷೆ ಮತ್ತು ಪ್ರಾಮುಖ್ಯತೆ (ಟಿಪ್ಪಣಿಗಳು)
6. ಒಜೈವ್ ನಕ್ಷೆ (Ogive Graph):
- ಸಂಚಿತ ಆವೃತ್ತಿಯ () ನಕ್ಷೆಯನ್ನು 'ಒಜೈವ್' ಎನ್ನುತ್ತಾರೆ.
- ಉಪಯೋಗ: ಇದನ್ನು ಬಳಸಿಕೊಂಡು ದತ್ತಾಂಶದ ಮಧ್ಯಕ (Median) ವನ್ನು ರೇಖಾಚಿತ್ರದ ಮೂಲಕ (ಗ್ರಾಫಿಕಲ್ ಆಗಿ) ಕಂಡುಹಿಡಿಯಲಾಗುವುದು.
- ವಿಧಗಳು: 'ಕಡಿಮೆ ಇರುವ' ವಿಧಾನ ಮತ್ತು 'ಹೆಚ್ಚು ಇರುವ' ವಿಧಾನ.
ಪರೀಕ್ಷೆಗೆ ಪ್ರಮುಖ ಪ್ರಶ್ನೆಗಳು (Score Booster)
ಒಂದು ಅಂಕದ ಪ್ರಶ್ನೆಗಳು:
- ಸರಾಸರಿ, ಮಧ್ಯಕ, ಮತ್ತು ಬಹುಲಕ ಎಂದರೇನು?
- Mean, Median, Mode ನಡುವಿನ ಪ್ರಾಯೋಗಿಕ ಸಂಬಂಧ ಸೂತ್ರ ಬರೆಯಿರಿ. (ಅತಿ ಮುಖ್ಯ).
- ಒಜೈವ್ ನಕ್ಷೆಯನ್ನು ಬಳಸಿ ಕೇಂದ್ರ ಪ್ರವೃತ್ತಿಯ ಯಾವ ಅಳತೆಯನ್ನು ಕಂಡುಹಿಡಿಯಬಹುದು? (ಮಧ್ಯಕ).
ಎರಡು & ಮೂರು ಅಂಕದ ಪ್ರಶ್ನೆಗಳು:
- ವರ್ಗಾಂತರ ಕೊಟ್ಟು ವರ್ಗಮಧ್ಯ (Class mark ) ಕಂಡುಹಿಡಿಯುವ ಪ್ರಶ್ನೆ.
- ಸಾಮಾನ್ಯ ಅಥವಾ ಕೇವಲ ಬಾಕ್ಸ್ ಕೊಟ್ಟು ಸರಾಸರಿ ಕಂಡುಹಿಡಿಯುವುದು.
ನಾಲ್ಕು & ಐದು ಅಂಕದ ಪ್ರಶ್ನೆಗಳು (ದೀರ್ಘ ಉತ್ತರಗಳು - ಪರೀಕ್ಷೆಗೆ ಫಿಕ್ಸ್):
- ಗುಂಪುಗೊಳಿಸಿದ ದತ್ತಾಂಶ ಕೋಷ್ಟಕ (Grouped Data Table) ನೀಡಿ ಸರಾಸರಿ, ಮಧ್ಯಕ ಅಥವಾ ಬಹುಲಕ ಲೆಕ್ಕ ಮಾಡುವುದು (ಇವು ಮೂರರಲ್ಲಿ ಕನಿಷ್ಠ 2 ಲೆಕ್ಕಗಳು ಪರೀಕ್ಷೆಯಲ್ಲಿ ಫಿಕ್ಸ್).
- ಒಜೈವ್ ನಕ್ಷೆ ಬಿಡಿಸುವುದು (Ogive Curve): ಸಂಚಿತ ಆವೃತ್ತಿ ಪಟ್ಟಿ ತಯಾರಿಸಿ ಗ್ರಾಫ್ ಬಿಡಿಸಿ ಮಧ್ಯಕ ಕಂಡುಹಿಡಿಯುವ ಪ್ರಶ್ನೆ (ಇದು 3 ಅಥವಾ 4 ಅಂಕಕ್ಕೆ 100% ಬರುತ್ತದೆ).
ನೆನಪಿನ ಸಾರಾಂಶ ಮತ್ತು ಸ್ಮರಣೀಯ ಸೂತ್ರ:
- ಸೂತ್ರಗಳನ್ನು ನೆನಪಿಡಲು:
- Mean:
- Median: ಯಿಂದ ಶುರುವಾಗಿ ಅನ್ನು ಕಳೆಯಬೇಕು. ()