ಆರ್ಥಿಕ ಯೋಜನೆ ಎಂದರೇನು?
ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ನಿರ್ದಿಷ್ಟ ಅವಧಿಯಲ್ಲಿ ನಿರ್ದಿಷ್ಟ ಗುರಿಗಳನ್ನು ಸಾಧಿಸುವ ಪ್ರಕ್ರಿಯೆಯೇ ಆರ್ಥಿಕ ಯೋಜನೆ.
'ಅನಿರ್ಬಂಧಿತ ಆರ್ಥಿಕ ನೀತಿ' ಎಂದರೇನು?
ಆರ್ಥಿಕ ಚಟುವಟಿಕೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು ಎಂಬ ನೀತಿಯನ್ನು ಅನಿರ್ಬಂಧಿತ ಆರ್ಥಿಕ ನೀತಿ ಎನ್ನಲಾಗುತ್ತದೆ.
ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳ ಅವಧಿ ಎಷ್ಟು?
ಭಾರತದಲ್ಲಿ ಪಂಚವಾರ್ಷಿಕ ಯೋಜನೆಗಳ ಅವಧಿ 5 ವರ್ಷಗಳು.
'Planned Economy for India' ಕೃತಿಯ ಕರ್ತೃ ಯಾರು?
ಸರ್ ಎಂ. ವಿಶ್ವೇಶ್ವರಯ್ಯ ಅವರು ಈ ಕೃತಿಯ ಕರ್ತೃ.
ಸಾಮಾಜಿಕ ನ್ಯಾಯ ಎಂದರೇನು?
ದೇಶದ ಆದಾಯ ಮತ್ತು ಸಂಪತ್ತು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಸಮಾನವಾಗಿ ಹಂಚಿಕೆಯಾಗುವುದನ್ನು ಸಾಮಾಜಿಕ ನ್ಯಾಯ ಎನ್ನಲಾಗುತ್ತದೆ.
ಆರ್ಥಿಕ ಸ್ಥಿರತೆ ಎಂದರೆ ಯಾವುದು?
ಬೆಲೆಗಳಲ್ಲಿ ಅತಿಯಾದ ಏರಿಳಿತಗಳಿಲ್ಲದೆ ಆರ್ಥಿಕ ಪ್ರಗತಿ ಸಾಧಿಸುವುದನ್ನು ಆರ್ಥಿಕ ಸ್ಥಿರತೆ ಎನ್ನಲಾಗುತ್ತದೆ.
ಸುಗ್ಗಿ ನಂತರದ ತಂತ್ರಜ್ಞಾನ ಎಂದರೆ ಏನು?
ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಅವುಗಳ ಬಾಳಿಕೆ ಹೆಚ್ಚಿಸಿ ಹೆಚ್ಚಿನ ಮೌಲ್ಯ ಪಡೆಯುವ ತಂತ್ರಜ್ಞಾನವೇ ಸುಗ್ಗಿ ನಂತರದ ತಂತ್ರಜ್ಞಾನ.
ಭಾರತದಲ್ಲಿ ನೀತಿ ಆಯೋಗ ಯಾವಾಗ ಸ್ಥಾಪನೆಯಾಯಿತು?
ಜನವರಿ 1, 2015 ರಂದು ನೀತಿ ಆಯೋಗ ಸ್ಥಾಪನೆಯಾಯಿತು.
ಹಸಿರು ಕ್ರಾಂತಿ ಎಂಬ ಪದದ ಅರ್ಥವೇನು?
ಕೃಷಿ ಉತ್ಪಾದನೆಯಲ್ಲಿ ಅಲ್ಪಾವಧಿಯಲ್ಲಿ ಉಂಟಾದ ಶೀಘ್ರ ಅಥವಾ ತೀವ್ರ ಪ್ರಗತಿಯನ್ನು ಹಸಿರು ಕ್ರಾಂತಿ ಎನ್ನಲಾಗುತ್ತದೆ.
ನೀತಿ ಆಯೋಗದ ಪದನಿಮಿತ್ತ ಅಧ್ಯಕ್ಷರು ಯಾರು?
ಭಾರತದ ಪ್ರಧಾನಮಂತ್ರಿಗಳು ನೀತಿ ಆಯೋಗದ ಪದನಿಮಿತ್ತ ಅಧ್ಯಕ್ಷರು.
ಭಾರತದಲ್ಲಿ ಹಸಿರು ಕ್ರಾಂತಿಯ ಪಿತಾಮಹ ಯಾರು?
ಡಾ. ಎಂ.ಎಸ್. ಸ್ವಾಮಿನಾಥನ್ ಅವರು ಭಾರತದ ಹಸಿರು ಕ್ರಾಂತಿಯ ಪಿತಾಮಹ.
ಅಟಲ್ ನಾವೀನ್ಯತೆ ಮಿಷನ್ (Atal Innovation Mission) ನ ಉದ್ದೇಶವೇನು?
ದೇಶದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವುದು ಇದರ ಉದ್ದೇಶ.
ಸೇವಾ ವಲಯದ ಬೆಳವಣಿಗೆಯಿಂದ ಉಂಟಾದ ಒಂದು ಲಾಭವನ್ನು ತಿಳಿಸಿ.
ಸೇವಾ ವಲಯದ ಬೆಳವಣಿಗೆಯಿಂದ ಉದ್ಯೋಗಾವಕಾಶಗಳು ಹೆಚ್ಚಿವೆ ಮತ್ತು ರಫ್ತು ಪ್ರಮಾಣ ವಿಸ್ತರಿಸಿದೆ.